ಇನ್ನು ಮುಂದೆ ಅಕ್ಕಿ ಸಿಗಲಿದೆ ಬರಿ 29ಕ್ಕೆ ಮಾತ್ರ ಹೌದು ಇದು ಕೇಂದ್ರ ಸರ್ಕಾರದ ಹೊಸ ಯೋಜನೆಯಾಗಿದ್ದು ಪ್ರತಿಯೊಬ್ಬ ಭಾರತೀಯನಿಗೂ ಈ ಯೋಜನೆ ದೊರೆಯಲಿದೆ.
ಜನಸಾಮಾನ್ಯರು ಈಗಾಗಲೇ ಬೆಲೆ ಏರಿಕೆಯಿಂದ ಕೆಂಗೇಟ್ಟಿದ್ದಾರೆ ಅದರಲ್ಲೂ ಅಕ್ಕಿಯು ದಿನದಿಂದ ದಿನ ಬೆಲೆ ಏರುತ್ತಲೇ ಇದೆ. ಇದು ಕೇಂದ್ರ ಸರ್ಕಾರದ ಪಾಲಿಗೆ ದೊಡ್ಡ ಸವಾಲೇ ಆಗಿದೆ ಆದ್ದರಿಂದ ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಜನರಿಗೆ ಬರಿ 29 ಗೆ 1 ಕೆಜಿ ಅಕ್ಕಿ ಕೊಡಲು ನಿರ್ಧಾರ ಮಾಡಿದೆ.
ಬೆಲೆ ಏರಿಕೆಯಿಂದ ಹಣದುಬ್ಬರವು ಹೆಚ್ಚಾಗುತ್ತಿದೆ ಈ ನಿಟ್ಟಿನಲ್ಲಿ ಇದಕ್ಕೆ ಕಡಿವಾಣ ಹಾಕುವುದಕ್ಕೆ ಭಾರತದ ಕೇಂದ್ರ ಸರ್ಕಾರವು ಭಾರತ್ ಎಂಬ ಬ್ರಾಂಡ್ ನ ಮುಖಾಂತರ ಜನಸಾಮಾನ್ಯರಿಗೆ ಸಬ್ಸಿಡಿ ರೂಪದಲ್ಲಿ ಕೆಲ ಬೇಳೆಕಾಳುಗಳನ್ನು ವಿತರಿಸಲು ನಿರ್ಧರಿಸಿದೆ.
ಈ ಹಿಂದೆ ಈ ಬ್ರಾಂಡ್ ನ ಮುಖಾಂತರ ಕಡಲೆಬೇಳೆ ಹಾಗೂ ಗೋಧಿ ಹಿಟ್ಟನ್ನು ಸರ್ಕಾರವು ಜಾರಿಗೆ ಗೊಳಿಸಿತ್ತು ಇದರಲ್ಲಿ ಕಡಲೆಬೇಳೆ 60 ರೂಪಾಯಿ ಹಾಗೂ ಗೋಧಿ ಹಿಟ್ಟು 10 ಕೆಜಿ ಗೆ 275 ರೂಪಾಯಿಗಳ ಮೊತ್ತದಲ್ಲಿ ಜನರಿಗೆ ತಲುಪಲು ಯಶಸ್ವಿಯಾಗಿತ್ತು.
ಅದರಲ್ಲಿ ತುಂಬಾ ಮುಖ್ಯ ಪಾಲು ಬೆಂಗಳೂರು ನಗರಕ್ಕೆ ಏಕೆಂದರೆ ಈ ಹಿಂದೆ ಬಿಟ್ಟಿದ್ದ ಕಡಲೆಬೇಳೆ ಹಾಗೂ ಗೋಧಿ ಹಿಟ್ಟನ್ನು ಬೆಂಗಳೂರಿನ ಜನರಿಂದ ತುಂಬಾ ಒಳ್ಳೆ response ದೊರಕಿದೆ . ಬೆಂಗಳೂರು ನಗರದಲ್ಲಿ 2,81,572 ಕೆಜಿ ಭಾರತ್ ದಾಲ್ ಹಾಗೂ1,22,170 ಕೆಜಿ ಗೋಧಿ ಹಿಟ್ಟು ಮಾರಾಟವಾಗಿದೆ. ಆದಕಾರಣ ಈಗ ಆ ಎರಡು ವಸ್ತುಗಳ ಜೊತೆಗೆ ಅಕ್ಕಿಯನ್ನು ಸಬ್ಸಿಡಿ ರೂಪದಲ್ಲಿ ಜನರಿಗೆ ತಲುಪಿಸಲು ಕೇಂದ್ರ ಸರ್ಕಾರವು ಈ ನಿಯಮವನ್ನು ಜಾರಿಗೆ ತಂದಿದೆ.
ಇದನ್ನು NCCF (National co-operative consumer Federation of India LTD) ಮುಖಾಂತರ ಜನರಿಗೆ ತಲುಪಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದೆ. ಈಗ ಎನ್ NCCF ನ ಮುಖ್ಯ ಗೋಡನ್ ಈಗ ಯಶವಂತಪುರದಲ್ಲಿ ಇದೆ.
ಇದು ಬೆಂಗಳೂರಿನ 50 ಕ್ಕೂ ಹೆಚ್ಚು ನಗರಗಳಿಗೆ ಮೊಬೈಲ್ ವ್ಯಾನ್ ಮುಖಾಂತರ ಮನೆ ಮನೆಗೂ ತಲುಪಿಸುವ ಯೋಜನೆಯಾಗಿದೆ.
ಇನ್ನು ವಿಸ್ತರಿಸುವುದಾದರೆ ಈ ಬ್ರಾಂಡ್ ನ ಅಕ್ಕಿಯು ಬೆಂಗಳೂರಿನ ಬಸವೇಶ್ವರ ನಗರ, ದೀಪಾಂಜಲಿ ನಗರ, ಮಹಾಲಕ್ಷ್ಮಿ ಲೇಔಟ್, ಗಾಯತ್ರಿ ನಗರ, ನಾಗಸಂದ್ರ, ಅಬ್ಬಿಗೆರೆ ಚಿಕ್ಕಬಾಣಾವರ ಥನಿಸಂದ್ರ ಹೆಸರಘಟ್ಟ ಯಲಹಂಕ ಮಾಗಡಿ ರೋಡ್ ಕೊಡಗೆಹಳ್ಳಿ ಶೇಷಾದ್ರಿಪುರಂ ಸಂಜಯನಗರ ಜಕ್ಕುರು ಬನಶಂಕರಿ ಸೇರಿದಂತೆ 50ಕ್ಕೂ ಹೆಚ್ಚು ನಗರಗಳಿಗೆ ಈ ಭಾರತ್ ಬ್ರಾಂಡ್ ವಸ್ತುಗಳು ಮನೆ ಮನೆಗೂ ಮೊಬೈಲ್ ವ್ಯಾನ್ ಮುಖಾಂತರ ಜನರಿಗೆ ತಲುಪಲಿದೆ.
ಈ ಹಿಂದೆ ಭಾರತ್ ಬ್ರಾಂಡ್ ನಲ್ಲಿ ಈರುಳ್ಳಿ ಸಹ ಮಾರಾಟ ಮಾಡಲಾಗುತ್ತಿತ್ತು ಏಕೆಂದರೆ ಆಗ ಈರುಳ್ಳಿ ಬೆಲೆ ಮಾರುಕಟ್ಟೆಯಲ್ಲಿ ನೂರರ ಗಡಿ ದಾಟಿತ್ತು. ಆದರೆ ಈರುಳ್ಳಿ ಬೆಲೆ ಮಾರುಕಟ್ಟೆಯಲ್ಲಿ ಈಗ ತುಂಬಾ ಕಡಿಮೆ ಇರುವುದರಿಂದ ಅದನ್ನು ಈಗ ಭಾರತ್ ಬ್ರಾಂಡ್ ನಲ್ಲಿ ಕೊಡುತ್ತಿಲ್ಲ.
ಹಾಗೂ ಇದರಲ್ಲಿ ಇವುಗಳನ್ನು ಹೊರತುಪಡಿಸಿ ಇನ್ನು ಕೆಲವು ಬೇಳೆಕಾಳುಗಳನ್ನು ಅಂದರೆ ತೊಗರಿಬೇಳೆ, ಹೆಸರು ಕಾಳು, ಹೆಸರುಬೇಳೆ, ಸಕ್ಕರೆ ಇನ್ನು ಕೆಲವು ಮುಂತಾದ ಬೇಳೆಕಾಳುಗಳನ್ನು ತರಲು ಕೇಂದ್ರ ಸರ್ಕಾರ ನಿರ್ಧರಿಸುತ್ತಿದೆ.
ಮತ್ತು ಈ ವಸ್ತುಗಳು ಈಗಾಗಲೇ ಅಮೆಜಾನ್ ಫ್ಲಿಪ್ಕಾರ್ಟ್ ಹಾಗೂ ಜಿಯೊ ಮಾರ್ಟ್ ಇನ್ನು ಕೆಲವು ಮುಂತಾದ ಈ ಕಾಮರ್ಸ್ ಪ್ಲಾಟ್ಫಾರ್ಮ್ ಗಳಲ್ಲಿ ದೊರೆಯಲಿದೆ.
ಹಾಗೂ ಮುಂದೆ ಈ ಯೋಜನೆಯು ರಾಜ್ಯದ ಪ್ರತಿ ಹಳ್ಳಿಗೂ ತಲುಪಲಿದೆ ಎಂದು ಮಾಹಿತಿಗಳು ತಿಳಿಸಿದೆ.
ಈ ಯೋಜನೆಯು ಬೆಂಗಳೂರು ನಗರದಲ್ಲಿ ಯಶಸ್ವಿಯಾದ ರೀತಿ ರಾಜ್ಯದ ಪ್ರತಿ ಹಳ್ಳಿ ಹಳ್ಳಿಯಲ್ಲು ಯಶಸ್ವಿಯಾಗಲಿದೆ ಎಂದು ಹೇಳಲಾಗುತ್ತಿದೆ.