ರಾಮಜನ್ಮ ಭೂಮಿಯ ಇತಿಹಾಸ – ಅಯೋದ್ಯ ರಾಮಮಂದಿರ ವನ್ನು ಕಟ್ಟಿದವರು ಯಾರು ಮತ್ತು ನೆಲಸಮ ಮಾಡಿದವರಾರು?
ಅಯೋದ್ಯ ರಾಮಮಂದಿರ ವನ್ನು ನೆಲಸಮ ಮಾಡಿದವರಾರು?
ಅಲ್ಲಿನ ರಾಮಮಂದಿರವನ್ನು ಕೆಡವಿ ಮಸೀದಿಯನ್ನು ನಿರ್ಮಿಸಿದವರು ಯಾರು?
ಇದು ನಿಜವಾಗಿಯೂ ಯಾರ ಸ್ವತ್ತು ಹಾಗೂ ಈ ಜಾಗ ರಾಮ ಭೂಮಿಯು ಅಥವಾ ಮಸೀದಿಯೋ.
ಇದೇ ಜನವರಿ 22 ಅಂದರೆ ಜನವರಿ 22 2024 ಇದು ಭಾರತೀಯರ ಪಾಲಿಗೆ ಮಹತ್ತರ ಹಾಗೂ ಐತಿಹಾಸಿಕ ದಿನವೆಂದರೆ ತಪ್ಪಾಗಲಾರದು.
ನೂರಾರು ವರ್ಷಗಳಿಂದ ಹೋರಾಡುತ್ತಿರುವ ರಾಮಜನ್ಮಭೂಮಿ ಇದೀಗ ರಾಮನ ಸ್ವತ್ತು ಹಾಗೂ ರಾಮ ಜನಿಸಿದ ಸ್ಥಳವೇ ಎಂದು ಗುರುತಿಸಿ ಅಲ್ಲಿ ಅತಿ ದೊಡ್ಡ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗಿದೆ
ಅಯೋಧ್ಯಾ ರಾಮ ಭೂಮಿಯ ಇತಿಹಾಸವನ್ನು ನಾವು ನೋಡುವುದಾದರೆ ಇದು ವಿಚಿತ್ರ ಕಥೆಯನ್ನು ಒಳಗೊಂಡಿರುವ ಮತ್ತು ಇಲ್ಲಿ ಅನೇಕ ಬಾರಿ ರಾಮಮಂದಿರವನ್ನು ನಿರ್ಮಿಸಿ ಮತ್ತು ಕೆಡವಲಾಯಿತು.
ಭಗವಾನ್ ರಾಮನ ಪುತ್ರ ಕುಶಾ ನಿರ್ಮಿಸಿದ ದೇವಾಲಯ.
ಶ್ರೀ ರಾಮನ ದೇವಾಲಯವನ್ನು ಮೊದಲ ಬಾರಿಗೆ ನಿರ್ಮಿಸಿದವರು ಭಗವಾನ್ ರಾಮನ ಪುತ್ರ “ಕುಶ”.
ಭಗವಾನ್ ರಾಮನು ಜಲಸಮಾಧಿಯಾದ ನಂತರ ಅಯೋಧ್ಯೆಯು ನಿಧಾನವಾಗಿ ಕ್ಷಿಣಿಸಲು ಆರಂಭಿಸಿತು.
ಇದನ್ನು ಕಂಡ ರಾಮನ ಮಗ ಕುಷ ಇದನ್ನು ಪುನರ್ನಿರ್ಮಾಣ ಮಾಡುತ್ತಾನೆ. ತದನಂತರ ಸೂರ್ಯವಂಶದ ಕೊನೆಯ ರಾಜನಾದ ಬೃಹದ್ಬಲ್ಲನು ಇದನ್ನು ನೋಡಿಕೊಂಡು ಹೋಗುತ್ತಾನೆ. ಆದರೆ ಮಹಾಭಾರತದ ಯುದ್ಧದ ಸಮಯದಲ್ಲಿ ಬೃಹದ್ಬಲ್ಲನು ಅಭಿಮನ್ಯು ನ ಕೈಯಲ್ಲಿ ಸಾವನ್ನಪ್ಪುತ್ತಾನೆ. ಇದರ ನಂತರವೂ ರಾಮ ಭೂಮಿಯಲ್ಲಿ ದೇವರನಾಮ ಪಡಿಸಲಾಗುತ್ತಿತ್ತು ಮತ್ತು ಇದರ ಬಗ್ಗೆ ಜನರಲ್ಲಿ ಮಾನ್ಯತೆ ಕೂಡ ಇತ್ತು ಆದರೆ ದಿನಗಳು ಕಳೆದಂತೆ ಅಯೋಧ್ಯ ನಗರವು ಮಾನ್ಯತೆ ಕಳೆದುಕೊಳ್ಳುತ್ತ ಹೋಯಿತು.
ಚಕ್ರವರ್ತಿ ವಿಕ್ರಮಾದಿತ್ಯನು ಕಂಡುಹಿಡಿದು ರಾಮ ದೇವಾಲಯವನ್ನು ನಿರ್ಮಿಸುತ್ತಾನೆ.
ಹಾಗೆ ಹೇಳುವುದಾದರೆ ಪುರಾವೆಗಳ ಪ್ರಕಾರ ರಾಮ ಭೂಮಿಯನ್ನು ಚಕ್ರವರ್ತಿ ವಿಕ್ರಮಾದಿತ್ಯನು ನಿರ್ಮಿಸಿದನೆಂದು ಹೇಳಲಾಗುತ್ತಿದೆ. ಇತಿಹಾಸದ ಪ್ರಕಾರ ಚಕ್ರವರ್ತಿ ವಿಕ್ರಮಾದಿತ್ಯನು ವಾಯುವಿಹಾರಕ್ಕೆಂದು ಹೊರಗಡೆ ಬರುತ್ತಾನೆ. ಸುತ್ತಾಟದಿಂದ ಸುಸ್ತಾದ ವಿಕ್ರಮಾದಿತ್ಯನು ಸರಯೂ ನದಿಯ ಬಳಿ ಇರುವ ಮರವೊಂದರ ಕೆಳಗೆ ಕೂತು ವಿಶ್ರಾಂತಿಯನ್ನು ಪಡೆಯುತ್ತಿರುತ್ತಾರೆ ದಟ್ಟವಾದ ಅರಣ್ಯ ಒಂದು ಕಾಣುತ್ತದೆ ಆ ಅರಣ್ಯ ಹಾಗೂ ಜಾಗದ ಬಗ್ಗೆ ವಿಕ್ರಮಾದಿತ್ಯನು ಶೋಧವನ್ನು ನಡೆಸಿದಾಗ ಅದು ರಾಮಜನ್ಮಭೂಮಿ ಎಂದು ಅಲ್ಲಿರುವ ಸಂತರು ಮತ್ತು ಋಷಿಮುನಿಗಳ ಮುಖಾಂತರ ಆ ಜಾಗದ ಮಹಿಮೆ ಗೊತ್ತಾಗುತ್ತದೆ.
ಅದಾದ ಬಳಿಕ ಚಕ್ರವರ್ತಿ ವಿಕ್ರಮಾದಿತ್ಯನು ಅಲ್ಲಿ ಭವ್ಯವಾದ ರಾಮ ದೇವಾಲಯವನ್ನು ಕಟ್ಟುತ್ತಾನೆ ಹಾಗೂ ಚಕ್ರವರ್ತಿ ವಿಕ್ರಮಾದಿತ್ಯನ ಕಾಲದ ನಂತರ ಅನೇಕ ರಾಜರುಗಳು ಮತ್ತು ರಾಜಮನೆತನಗಳು ಈ ದೇವಾಲಯವನ್ನು ಪೂಜೆ ಪುನಸ್ಕಾರಗಳ ಜೊತೆಗೆ ನೋಡಿಕೊಳ್ಳುತ್ತಾರೆ.
ಪುಷ್ಯ ಮಿತ್ರರಿಂದ ರಾಮ ದೇವಾಲಯವು ಜೀರ್ಣೋದ್ಧಾರ ವಾಗುತ್ತದೆ
ನಂತರ ಶೃಂಗ ರಾಜವಂಶದ ಮೊದಲ ಆಡಳಿತಗಾರ ಪುಷ್ಯ ಮಿತ್ರನು ರಾಮಜನ್ಮಭೂಮಿಯಲ್ಲಿ ನಿರ್ಮಿಸಿದ ದೇವಾಲಯಗಳನ್ನು ನವೀಕರಿಸುತ್ತಾನೆ. ಇವರಿಗೆ ಅಯೋಧ್ಯೆಯಲ್ಲಿ ಶಾಸನವೊಂದು ದೊರೆಯುತ್ತದೆ. ಇದು ಅಯೋಧ್ಯೆಯ ಗುಪ್ತ ರಾಜವಂಶದ ಎರಡನೇ ಚಂದ್ರಗುಪ್ತನ ರಾಜ್ಯಧಾನಿ ಯಾಗಿತ್ತು ಎಂದು ತಿಳಿಯುತ್ತದೆ. ಮತ್ತು ಕಾಳಿದಾಸನು ಕೂಡ ಅಯೋದ್ಯ ರಾಮಮಂದಿರ ಬಗ್ಗೆ ಉಲ್ಲೇಖಿಸಿದ್ದಾನೆ. ಹಾಗೂ ಎರಡನೇ ಚಂದ್ರಗುಪ್ತ ರ ನಂತರ ಅನೇಕ ರಾಜವಂಶರು ಮತ್ತು ರಾಜಮನೆತನಗಳು ರಾಮಮಂದಿರವನ್ನು ನೋಡಿಕೊಂಡರು ಎಂದು ಹೇಳಲಾಗುತ್ತದೆ.
ಬೌದ್ಧ ಕೇಂದ್ರವಾಗಿ ಅಭಿವೃದ್ಧಿ ಗೊಂಡಿತ್ತು ರಾಮಮಂದಿರ.
ಪುರಾವೆಗಳ ಪ್ರಕಾರ ಸುಮಾರು ಐದನೇ ಶತಮಾನದಲ್ಲಿ ಅಯೋಧ್ಯ ರಾಮಮಂದಿರ ಬೌದ್ಧ ಕೇಂದ್ರವಾಗಿ ಅಭಿವೃದ್ಧಿ ಹೊಂದಿತು ಎನ್ನಲಾಗುತ್ತದೆ. ಮತ್ತು ಇಲ್ಲಿ ಆದಿನಾಥರು ಸೇರಿದಂತೆ ಐದು ತೀರ್ಥಂಕರರು ಜನ್ಮವನ್ನು ಪಡೆದಿರುತ್ತಾರೆ. ಆದ್ದರಿಂದ ಈ ಸ್ಥಳವನ್ನು ಸಾಕೇತ್ಎಂದು ಕರೆಯಲಾಗುತ್ತಿತ್ತು. ಮತ್ತು ತದನಂತರ ಬಂದ ಕನೌಜ್ ರಾಜ್ ಜಯಚಂದ್ರ ಚಕ್ರವರ್ತಿ ವಿಕ್ರಮಾದಿತ್ಯನ ಹೆಸರನ್ನು ತೆಗೆದು ತನ್ನ ಹೆಸರನ್ನು ಬರಿಸುತ್ತಾನೆ.
ನಂತರ ರಾಜ ಜಯಚಂದ್ರ ಪಾಣಿಪತ್ ಯುದ್ಧದಲ್ಲಿ ಸಾವನ್ನಪ್ಪುತ್ತಾನೆ. ನಂತರ ಬಂದ ಅನೇಕ ಆಕ್ರಮಣಕಾರರು ಅಯೋಧ್ಯೆ ಸೇರಿದಂತೆ ಕಾಶಿಯ ಮಥುರ ಮೇಲೆ ದಾಳಿ ಮಾಡಿ ಅನೇಕ ದೇವಾಲಯಗಳನ್ನು ನೆಲಸಮ ಮಾಡಿದರು. ಮತ್ತು ಅಲ್ಲಿನ ಪುರೋಹಿತರನ್ನು ಹತ್ಯೆಗೈದರು. ಆದರೆ ಅವರಿಗೆ 14ನೇ ಶತಮಾನದವರೆಗೂ ದೇವಾಲಯವನ್ನು ಕೆಡವಲು ಸಾಧ್ಯವಾಗಲಿಲ್ಲ. ಯಾಕೆಂದರೆ ಸಿಕಂದರ್ ಲೂದಿ ಆಳ್ವಿಕೆಯಲ್ಲಿ ಭವ್ಯವಾದ ರಾಮ ದೇವಾಲಯವಿತ್ತು ಎಂದು ಹೇಳಲಾಗುತ್ತದೆ.
ಆದರೆ ಹದಿನಾಲ್ಕನೇ ಶತಮಾನದ ನಂತರ ಮೊಘಲರ ಆಡಳಿತ ಶುರುವಾಗುತ್ತಿದೆ ಅವರ ಆಡಳಿತದಲ್ಲಿ ಅಂದರೆ 1527 ರಿಂದ 1528 ರ ವಳಗೆ ಅಲ್ಲಿರುವ ಭವ್ಯವಾದ ರಾಮ ದೇವಾಲಯವನ್ನು ನೆಲಸಮಗೊಳಿಸಿ ಅಲ್ಲಿ ಮಸೀದಿಯನ್ನು ನಿರ್ಮಾಣ ಮಾಡಲಾಯಿತು.
ರಾಮನ ಜಾಗದಲ್ಲಿ ಮಸೀದಿ ನಿರ್ಮಾಣ
ಅಂದಿನಿಂದ ಇಲ್ಲಿಯವರೆಗೂ ರಾಮಜನ್ಮಭೂಮಿ ಗೋಸ್ಕರ ರಾಮನ ಭಕ್ತರು ಅನೇಕ ಹೋರಾಟಗಳನ್ನು ಮಾಡಿ ತಮ್ಮ ಪ್ರಾಣಗಳನ್ನು ತ್ಯಜಿಸಿ ಕೊನೆಗೆ 2020ಕ್ಕೆ ಇದು ರಾಮಜನ್ಮಭೂಮಿ ಎಂದು ತೀರ್ಪು ಬರುತ್ತದೆ.
ಇದೇ ಜನವರಿ 22 ಅಂದರೆ ಜನವರಿ 22 2024 ಇದು ಭಾರತೀಯರ ಪಾಲಿಗೆ ಮಹತ್ತರ ಹಾಗೂ ಐತಿಹಾಸಿಕ ದಿನವೆಂದರೆ ತಪ್ಪಾಗಲಾರದು. ನೂರಾರು ವರ್ಷಗಳಿಂದ ಹೋರಾಡುತ್ತಿರುವ ರಾಮಜನ್ಮಭೂಮಿ ಇದೀಗ ರಾಮನ ಸ್ವತ್ತು ಹಾಗೂ ರಾಮ ಜನಿಸಿದ ಸ್ಥಳವೇ ಎಂದು ಗುರುತಿಸಿ ಅಲ್ಲಿ ಅತಿ ದೊಡ್ಡ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗಿದೆ
ಇದೇ ಜನವರಿ 22 ಅಂದರೆ ಜನವರಿ 22 2024 ಇದು ಭಾರತೀಯರ ಪಾಲಿಗೆ ಮಹತ್ತರ ಹಾಗೂ ಐತಿಹಾಸಿಕ ದಿನವೆಂದರೆ ತಪ್ಪಾಗಲಾರದು.
ನೂರಾರು ವರ್ಷಗಳಿಂದ ಹೋರಾಡುತ್ತಿರುವ ರಾಮಜನ್ಮಭೂಮಿ ಇದೀಗ ರಾಮನ ಸ್ವತ್ತು ಹಾಗೂ ರಾಮ ಜನಿಸಿದ ಸ್ಥಳವೇ ಎಂದು ಗುರುತಿಸಿ ಅಲ್ಲಿ ಅತಿ ದೊಡ್ಡ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗಿದೆ
ಇದರ ವಿಶೇಷತೆ ಗಳನ್ನು ನಾವು ನೋಡುವುದಾದರೆ.
- 10 ಎಕರೆ ಭೂಮಿಯಲ್ಲಿ ಈ ಮಂದಿರ ನಿರ್ಮಿಸಲಾಗಿದೆ, ಉಳಿದ 57 ಎಕರೆಯಲ್ಲಿ ದೇವಾಸ್ಥಾನಕ್ಕೆ ಸಂಬಂಧಿಸಿದ ಕಾಂಪ್ಲೆಕ್ಸ್‌ಗಳಿವೆ.
- ಹಿಂದೂಗಳ ನಂಬಿಕೆಯಂತೆ ಈ ದೇವಾಲಯವನ್ನು ನಿರ್ಮಿಸಲಾಗುತ್ತಿದೆ.
- ಈ ದೇವಾಲಯ ಬಾಳಿಕೆ ಬರಲು ರಾಜಾಸ್ಥಾನದ ಬನ್ಸಿ ಪರ್ವತದಿಂದ ತಂದ ಕಲ್ಲುಗಳನ್ನು ಬಳಸಲಾಗುತ್ತಿದೆ.
- ಪ್ರಮುಖ ದೇವಾಲಯದ ಸುತ್ತ 4 ದೇವಾಲಯಗಳಿವೆ.
- ಫೌಂಡೇಷನ್‌ಗೆ ಬಳಸಿದ ಇಟ್ಟಿಗೆಯಲ್ಲಿ ಶ್ರೀರಾಮ್ ಎಂದು ಕೆತ್ತಲಾಗಿದೆ ಎತ್ತರವನ್ನು 141 ಅಡಿಯಿಂದ 161 ಅಡಿ ಎತ್ತರಕ್ಕೆ ಏರಿಸಲಾಗಿದೆ. ಉದ್ದ 270 ಮೀ ಅಗಲ 140 ಮೀಟರ್ ಇದೆ.
- ಈ ದೇವಾಲಯ ನಿರ್ಮಿಸಲು ಭೂಮಿ ಪೂಜೆ ಮಾಡುವಾಗ 40 ಕೆಜಿ ಬೆಳ್ಳಿಯ ಇಟ್ಟಿಗೆಯನ್ನು ಬಳಸಲಾಗುವುದು.
- ಈ ದೇವಾಲಯ ನಿರ್ಮಿಸುವಾಗ 2000 ಧಾರ್ಮಿಕ ಸ್ಥಳಗಳಿಂದ ಮಣ್ಣು, 100 ಪುಣ್ಯ ನದಿಗಳಿಂದ ನೀರನ್ನು ತಂದು ಬಳಸಲಾಯ್ತು.
- ಈ ದೇವಾಲಯದ 221 ಸ್ತಂಭಗಳಿವೆ. ಪ್ರತಿಯೊಂದು ಕಂಬದಲ್ಲಿ 12 ದೇವ-ದೇವತೆಗಳ ಚಿತ್ರವನ್ನು ಕೆತ್ತಲಾಗಿದೆ.
- ಒಂದೇ ಬಾರಿಗೆ 10,000 ಭಕ್ತಾದಿಗಳು ಒಂದೇ ಬಾರಿಗೆ ದೇವರ ದರ್ಶನ ಪಡೆಯಬಹುದು.
- ಭೂಕಂಪನ ಸಂಭವಿಸಿದರೂ ಈ ದೇವಾಲಯಕ್ಕೆ ಅಷ್ಟು ಬೇಗ ಏನೂ ಆಗುವುದಿಲ್ಲ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 8-10 ಇದ್ದರೂ ಈ ದೇವಾಲಯಕ್ಕೆ ಏನೂ ಆಗುವುದಿಲ್ಲ.
- ಈ ದೇವಾಲಯವನ್ನು ನಗರಾ ಶೈಲಿಯಲ್ಲಿ ಕಟ್ಟಲಾಗಿದೆ, ಈ ದೇವಾಲಯವನ್ನು ವಾಸ್ತು ಶಾಸ್ತ್ರ ಪ್ರಕಾರ ಕಟ್ಟಲಾಗಿದೆ.
- ಅಯೋಧ್ಯೆ ರೈಲ್ವೆ ಸ್ಟೇಷನ್ ಅನ್ನು ಶ್ರೀರಾಮ ಮಂದಿರದಂತೆಯೇ ವಿನ್ಯಾಸಗೊಳಿಸಲಾಗಿರುವುದು ಇಲ್ಲಿಯ ವಿಶೇಷಗಳಲ್ಲಿ.
ಇದು ಆಯೋದ್ಯೆಯಲ್ಲಿ ಪ್ರತಿಷ್ಟಾಪನೆ ಗೊಂಡ ಬಾಲ ರಾಮನ ಮೂರ್ತಿ: